ಜಸ್ವಂತ್ ಸಿಂಗ್ (ಜನನ ಜನೆವರಿ ೩, ೧೯೩೮-ಮರಣ ಸೆಪ್ಟೆಂಬರ್, ೨೭, ೨೦೨೦) ಭಾರತದ ಒಬ್ಬ ರಾಜಕಾರಣಿ ಮತ್ತು ದಾರ್ಜಿಲಿಂಗ್ ಸಂಸದೀಯ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದಾರೆ. ಅವರು ಭಾರತದ ರಾಜಸ್ಥಾನ ರಾಜ್ಯದವರಾಗಿದ್ದಾರೆ ಮತ್ತು ೧೯೬೦ರ ದಶಕದಲ್ಲಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದರು ಮತ್ತು ಮೇಯೋ ಕಾಲೇಜ್ ಹಾಗೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಖಡಕ್‌ವಾಸ್ಲಾದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಅವರು, ಮೇ ೧೬,೧೯೯೬ರಿಂದ ಜೂನ್ ೧,೧೯೯೬ರ ವರೆಗೆ ಅಸ್ತಿತ್ವದಲ್ಲಿದ್ದ, ಅಟಲ್ ಬಿಹಾರಿ ವಾಜಪೇಯಿ ಅವರ ಅಲ್ಪಕಾಲದ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿ ಸೇವೆ ಸಲ್ಲಿಸಿದರು. == ನಿಧನ == ೮೨ ವರ್ಷದ ಜಸ್ವಂತ್ ಸಿಂಗ್ ರವರು ಸೆಪ್ಟೆಂಬರ್, ೨೭, ೨೦೨೦ ರಂದು ಜೈಪುರದಲ್ಲಿ ನಿಧನರಾದರು. == ಉಲ್ಲೇಖಗಳು ==